ಬೀದಿ ಮಕ್ಕಳು, ಸಾರ್!!!!
ಬೀದಿ ಮಕ್ಕಳು ಸಾರ್, ನಾವು ಬೀದಿ ಮಕ್ಕಳು
ಹೆತ್ತವರ ಪ್ರೀತಿಯಿಂದ ವಂಚಿತರಾದ ನಾವು ಅನಾಥರೂ ಹೌದು!
ನೋಡಿದೊಡನೆ ಕಾಣುವ ನಮ್ಮ ಬಂತೆ ಕಟ್ಟಿದ ಕೂದಲು
ಮಾನ ಮುಚ್ಚಿಕೊಳ್ಳಲು ಹಾಕಿದ ಕೊಳೆಗಟ್ಟಿದ, ಹರುಕು ಬಟ್ಟೆಗಳು,
ಚುರುಗುಟ್ಟುವ ಬಿಸಿಲಿಗೆ ಕಪ್ಪುಗಟ್ಟಿದ ಮುಖಗಳು,
ಇವೆ, ನಮ್ಮ ಲಕ್ಷಣಗಳು!
ಬೆಳಗಿಂದ ಬೀದಿ ಬೀದಿ ಸುತ್ತಾಡಿ, ಸುಸ್ತಾಗಿ
ತಿನ್ನಲು ಏನು ಸಿಗದೆ ಕಂಗಾಲಾಗಿವೆ ನೂರಾರು ಹಸಿದ ಹೊಟ್ಟೆಗಳು,
"ಬಾಲ ಕಾರ್ಮಿಕ ಪದ್ಧತಿ" ನಿರ್ಮೂಲನೆಯಿಂದ ಕೆಲಸವಿಲ್ಲದೆ,
ಖಾಲಿ ಹೊಟ್ಟೆಯ ತುಂಬಲು ಕಸದತೊಟ್ಟಿಯಲಿ ಏನಾದರು ಸಿಗುವುದೆ
ಎಂದು ಹುಡುಕುತಿವೆ ನಮ್ಮ ಓರಟು ಕೈಗಳು,
ಸಿಕ್ಕಿದ್ದನ್ನೆಲ್ಲ ತಿಂದು, ಅಸ್ವಸ್ಥಗೊಂಡು
ಶ್ರಿಮಂತ ಹೊಟ್ಟೆಬಾಕರ ಮನೆಯ ನಾಯಿಯ ಅದ್ರುಷ್ಟವೂ ನಮಗಿಲ್ಲದೆ
ದಿನ ನಿತ್ಯ ಸಾಯುತ್ತಿರುವ ನಾವುಗಳು
ಬೀದಿ ಮಕ್ಕಳು ಸಾರ್, ನಾವು ಬೀದಿ ಮಕ್ಕಳು
ನಮ್ಮ ಮುಗ್ಧ ಮನಸನ್ನೆ ಬಂಡವಾಳವನ್ನಾಗಿಸಿಕೊಂಡು
ಭಿಕ್ಷೆಗೆ,ವೇಶ್ಯವಾಟಿಕೆಗೆ ನಮ್ಮ ತಳ್ಳಿ, ತಮ್ಮ ಕೈ ಬೆಚ್ಚಗಾಗಿಸಿಕೊಳ್ಳುವ ದುಷ್ಕರ್ಮಿಗಳು
ನಮ್ಮ ಹೆಸರನ್ನೇಳಿ ಹಣ ನುಂಗುವ ಸೇವ ಸಂಸ್ಥೆಗಳು..
ನಾವು ಬಡ ಮಕ್ಕಳಾಗಿ ಹುಟ್ಟಿದ್ದೇ ನಮ್ಮ ತಪ್ಪೆಂಬಂತೆ
ಚಿ, ಥೂ ಎಂದು ಮೂದಲಿಸುವ ಜನರು..
ಈ ನರಕದಲ್ಲೂ "ನಮಗೂ ಬದುಕುವ ಹಕ್ಕಿದೆ" ಎಂದು ಹೊರಾಡುತ್ತಿರುವ
ನಾವು ಬೀದಿ ಮಕ್ಕಳು ಸಾರ್, ನಾವು ಬೀದಿ ಮಕ್ಕಳು.
ನಮಗೆ ಬೇಕಾಗಿರುವುದು ಸಹಾಯವಲ್ಲ, ಅವಕಾಶವು
ವಿದ್ಯಾಭ್ಯಾಸ ಮತ್ತು ಎಲ್ಲರಂತೆ ಬದುಕಲು ಆವಕಾಶ ಸಿಕ್ಕರೆ
ನಾವೂ ಸಾಧಿಸಿ ತೊರಿಸುವೆವು
ನಮ್ಮನ್ನೂ ಬದುಕಲು ಬಿಡಿ ಎನ್ನುತಿಯೆವು!!!..
ಚಲವಂತರು ನಾವು ಗಟ್ಟಿಗರು